In a first-of-its-kind arrangement, former Prime Minister HD Deve Gowda's party is seeking to 'adopt' Congress leaders in three Lok Sabha seats in Karnataka and field them as JDS candidates.<br /><br /> ದೇವೇಗೌಡರು ತಲೆಯೊಳಗೆ ಅದೆಂಥ ಆಲೋಚನೆಗಳು, ಅದ್ಯಾವ ಕ್ಷಣದಲ್ಲಿ ಬರುತ್ತವೋ ಆ ಭಗವಂತನೇ ಬಲ್ಲ. ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ನವರು ಜೆಡಿಎಸ್ ಗೆ ಬಿಟ್ಟುಕೊಟ್ಟಾಗ, ರಾಜಕೀಯ ವಿಶ್ಲೇಷಕರು, ಬಿಜೆಪಿಯವರು ಹಬ್ಬ ಮಾಡುವ ಸಮಯ ಇದು. ಸುಲಭವಾಗಿ ಗೆದ್ದು ಬಿಡುತ್ತದೆ ಕೇಸರಿ ಪಕ್ಷ ಎನ್ನುತ್ತಿದ್ದರು. ಹೀಗೆ ಸಂಭ್ರಮದಲ್ಲಿರುವ ಬಿಜೆಪಿಯವರಿಗೆ ಶಾಕ್ ನೀಡುವಂಥ ಸುದ್ದಿಯೊಂದು ಜೆಡಿಎಸ್ ಪಾಳಯದಿಂದ ಬಂದಿದೆ.<br />